'ಕೇವಲ ಹತ್ತು ರೂಪಾಯಿ' ಪಾವತಿಸಿ ಹೃದಯ ಶ್ರೀಮಂತರಾಗಿ. | Milaap
'ಕೇವಲ ಹತ್ತು ರೂಪಾಯಿ' ಪಾವತಿಸಿ ಹೃದಯ ಶ್ರೀಮಂತರಾಗಿ.
4%
Raised
Rs.4,268
of Rs.100,000
25 supporters
 • S

  Created by

  Sevastana
 • SS

  This fundraiser will benefit

  Sadashiv Shetty

  from Mangalore

Story

ಗ್ರಾಮೀಣ ಪ್ರದೇಶದಲ್ಲಿ ಪ್ರತೀ ಕೃಷಿಕನ ಮನೆಯಲ್ಲೂ ಗೋವುಗಳ ಪಾಲನೆ ಸಾಮಾನ್ಯ. ಆದರೆ ಎಷ್ಟೋ ಬಡವರ ಮನೆಯಲ್ಲಿ ಜೀವನೋಪಾಯಕ್ಕಾಗಿ ಹಸುಗಳಿಗೆ ಬೇಕಾದ ಹುಲ್ಲು, ಹಿಂಡಿ, ಲಸಿಕೆ ಇತ್ಯಾದಿಗಗಳಿಗೆಲ್ಲದಕ್ಕೂ ಸಾಲ ಮಾಡಿ ಕಷ್ಟಪಟ್ಟು ಸಾಕಿ ಸಲಹಿದ ಹಸುವಿಗೆ ಕರು ಜನಿಸಿದ  ನಂತರ ಕರೆದ ಹಾಲನ್ನು ತಾನು ಒಂದು ತೊಟ್ಟು ಮುಟ್ಟದೆ ಡೈರಿಗೆ ಸುರಿದು ಜಮೆ ಆದ ಆದಾಯದಲ್ಲಿ ಊಟ, ಮಕ್ಕಳಿಗೆ ವಿದ್ಯೆ ಕೊಡಿಸಿದ ಅವೆಷ್ಟೋ  ಉದಾಹರಣೆಗಳು ನಮ್ಮ ಕಣ್ಣ ಮುಂದೆ ಕಾಣಸಿಗುತ್ತವೆ. ಆ ಮನೆಗಳಲ್ಲಿ ಗೋಮಾತೆಯೇ ಕುಟುಂಬದ ಪಾಲಿನ ದೇವರು.
 ಇಂತಹ ಕಾರಣಕ್ಕಾಗಿಯೇ ಹುಟ್ಟಿಕೊಂಡ ಈ  ನಮ್ಮ ಅಭಿಯಾನ ಪ್ರಾರಂಭದ ಹಂತದಲ್ಲಿದ್ದು, ಸಹಾಯ ಹಸ್ತಗಳ ಭರವಸೆಯಲ್ಲಿದೆ. ಐದು ಹೊತ್ತು ತಿನ್ನುವ ನಾವು ಒಂದು ತುತ್ತು ಗೋವಿಗಾಗಿ ಮತ್ತು ಅರ್ಹ ಬಡವರಿಗಾಗಿ ಮೀಸಲಿಡೋಣ. ಎಲ್ಲೊ ದೂರದ ದೇವಾಲಯಗಳಿಗೆ ಭೇಟಿ ಕೊಟ್ಟು ಕಾಣದ ದೇವರ ಹುಂಡಿಗೆ ನೂರಾರು, ಸಾವಿರಾರು ಸುರಿಯುವ ನಾವು, ಕಣ್ಣಿಗೆ ಕಾಣುವ ದೇವರಾದ ಅನ್ನ ಕೊಡುವ ಬಡ ರೈತ ಮತ್ತು ಕಾಮದೇನುವಿಗಾಗಿ ಕನಿಷ್ಠ ಕಾಣಿಕೆಯನ್ನು ಸಲ್ಲಿಸಿ ಹಸಿವನ್ನು ನೀಗಿಸುವುದರ ಮೂಲಕ ಹೃದಯ ಶೀಮಂತಿಕೆಯನ್ನು ತೋರಿಸಿ ಸಂತೃಪ್ತಿ ಹೊಂದಬಹುದಲ್ಲವೇ..? ಅರ್ಹರ ಪಾಲಿನ ದೇವರಾಗ ಬಹುದಲ್ಲವೇ....?
ಗೋವಿಗಾಗಿ ಮೇವು, ಮೇವಿಗಾಗಿ ನಾವು. ಗೋವು ಮೇವುಗಳ ನಡುವೆ ಸೇತುವಾಗೋಣ ಬನ್ನಿ.


Read More

support