Support Nishanth Shetty To Recover. | Milaap
Support Nishanth Shetty To Recover.
74%
Raised
Rs.370,327
of Rs.500,000
163 supporters
 • A

  Created by

  Ajith Sherry Heranje
 • NS

  This fundraiser will benefit

  Nishanth Shetty

  from Udupi, Karnataka

"ಅಪಘಾತದಲ್ಲಿ ಕಾಲು ಕಳೆದುಕೊಂಡ ನಿಶಾಂತ್ ಶೆಟ್ಟಿ; ಸಂಕಷ್ಟದಲ್ಲಿ ಕುಟುಂಬ"
ಎಲ್ಲಾ ಯುವಕರಂತೆ ಆತನಿಗೂ ಬದುಕಿನಲ್ಲಿ ನೂರಾರು ಕನಸುಗಳಿತ್ತು. ಅದನ್ನು
ಸಕಾರಗೊಳಿಸುವ ಸಲುವಾಗಿ ರಾತ್ರಿ-ಹಗಲು ಪರಿವಿಲ್ಲದೆ ನಿಂತಲ್ಲಿ ನಿಲ್ಲದೆ,ಕುಳಿತಲ್ಲಿ ಕೂರದೆ  ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಶಾಮಿಯಾನ, ಲೈಟಿಂಗ್ ಹೀಗೆ
ಹಲವಾರು ಕೆಲಸಗಳಲ್ಲಿ ಮೈಮುರಿದು ದುಡಿಯುತ್ತಿದ್ದ. ರಜೆ ಎಂದು ಒಂದು ದಿನ ಕೂಡಮನೆಯಲ್ಲಿ ಕುಳಿತುಕೊಳ್ಳುವ ಜಾಯಮಾನ ಆತನದ್ದಾಗಿರಲಿಲ್ಲ. ಆದರೆ ಈಗ ವಿಧಿಯಾಟವೇಬೇರೆಯಾಗಿದೆ. ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಓಡಾಡುತ್ತಿದ್ದ ಯುವಕನ ಒಂದು ಕಾಲು ಅಪಘಾತದಿಂದಾಗಿ ಕತ್ತರಿಸಲ್ಪಟ್ಟಿದೆ. ಬದುಕಿನ ಬಗ್ಗೆ ನೂರು ಕನಸುಗಳನ್ನು ಹೊಂದಿದವನು
ಮುಂದೇನು ಎನ್ನುವ ಚಿಂತೆಯಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿದ್ದಾನೆ. ಇದು ಕೋಟ ಸಮೀಪದ
ಮಧುವನ, ಅಚ್ಲಾಡಿಯ ನಿವಾಸಿ 21ವರ್ಷದ  ನಿಶಾಂತ್ ಶೆಟ್ಟಿಯ ಜೀವನದ ದುರಂತ ಕಥೆ.
ಈತ ಅಚ್ಲಾಡಿ ಬೈಲ್ಮನೆ ನಿವಾಸಿ ಸುರೇಶ್ ಶೆಟ್ಟಿ ಹಾಗೂ ಜ್ಯೋತಿ ಎಸ್.ಶೆಟ್ಟಿಯವರ ಏಕೈಕ ಪುತ್ರ.
ಇನ್ನೋರ್ವ ಪುತ್ರಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ತಂದೆ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ  ಚಿಕ್ಕ ಸಂಬಳಕ್ಕೆ ಕೆಲಸ ಮಾಡುತ್ತಿದ್ದು, ತಾಯಿ
ಮನೆಗೆಲಸ ನಿರ್ವಹಿಸಿಕೊಂಡಿದ್ದಾರೆ. ಹೀಗೆ ಈತನ ಕುಟುಂಬ ಆರಂಭದಿಂದಲೂ ಬಡತನದಲ್ಲಿ
ಜೀವನ ಸಾಗಿಸುತಿತ್ತು. ಮನೆಯ ಅರ್ಥಿಕ ಪರಿಸ್ಥಿತಿ ತೀರ ಹಡಗೆಟ್ಟಿದ್ದ ಕಾರಣ ನಿಶಾಂತ್ ಎಸೆಸೆಲ್ಸಿಗೆ ಶಿಕ್ಷಣ ತ್ಯಜಿಸಿ ಶಾಮಿಯಾನ, ಲೈಟಿಂಗ್ ಮುಂತಾದ ಕೆಲಗಳನ್ನು ಮಾಡಿ ಮನೆಯ ಬಹುತೇಕ ಖರ್ಚುವೆಚ್ಚಗಳನ್ನು ನಿರ್ವಹಿಸುತ್ತಾ ಪುಟ್ಟ ವಯಸ್ಸಿನಲ್ಲೇ ಮನೆಗೆ ಆಧಾರಸ್ತಂಭವಾಗಿದ್ದ. ಜತೆಗೆ ಊರಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ
ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ.
ಆದರೆ ಮೊನ್ನೆ 2019ರ ಮೇ 17ನೇ ತಾರೀಖು ಈತನ ಬಾಳಿನ ಕರಾಳ ಶುಕ್ರವಾರವಾಗಿತ್ತು. ಎಂದಿನಂತೆ ರಾತ್ರಿ ಸುಮಾರು 11ಗಂಟೆಗೆ ಕೋಟ ಸಮೀಪದ ಉಪ್ಲಾಡಿಯ ಮದುವೆ ಮನೆಯೊಂದರಲ್ಲಿ
ಲೈಟಿಂಗ್ ಕೆಲಸ ಮುಗಿಸಿ ಬೈಕ್‌ನಲ್ಲಿ  ಮನೆಗೆ ವಾಪಸಾಗುತ್ತಿದ್ದ ವೇಳೆ ಮಧುವನದಲ್ಲಿಎದುರಿನಿಂದ ಬರುತ್ತಿದ್ದ  ಪಾನಮತ್ತ ಕಾರುಚಾಲಕನೋರ್ವ ಸಂಪೂರ್ಣವಾಗಿ ವಿರುದ್ಧ ದಿಕ್ಕಿಗೆ ಬಂದು ಈತನ ಬೈಕ್‌ಗೆ ಢಿಕ್ಕಿ ಹೊಡೆದಿದ್ದ.ಅಪಘಾತದ ರಭಸಕ್ಕೆ ಬೈಕ್
ಛಿದ್ರಗೊಂಡಿತ್ತು. ಸಂಪೂರ್ಣ ರಕ್ತಸಿಕ್ತವಾಗಿ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು
ಸ್ಥಳೀಯರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ  ದಾಖಲಿಸಿದ್ದರು. ಬದುಕುವುದೇ ಕಷ್ಟ
ಎನ್ನುವ ಸ್ಥಿತಿಯಲ್ಲಿ ನಾಲ್ಕೈದು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ನಿಶಾಂತ್
ಕೊನೆಗೂ ಪ್ರಾಣಾಪಾಯದಿಂದ ಪಾರಾದ. ಆದರೆ ವೈದ್ಯರು ಸಾಕಷ್ಟು ಪ್ರಯತ್ನಪಟ್ಟರು
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಆತನ ಬಲಗಾಲನ್ನು ಕತ್ತರಿಸಬೇಕಾಯಿತು.                    ಇದೀಗ ಶಸ್ತ್ರಚಿಕಿತ್ಸೆ ನಡೆದಿದ್ದು  ತೊಡೆಯ ಭಾಗದ ವರೆಗೆ ಕಾಲು ಕತ್ತರಿಸಲ್ಪಟ್ಟಿದೆ. ಕೈ ಕೂಡ ಸರ್ಜರಿ ಮಾಡಲಾಗಿದೆ. ದೇಹದ ಒಳ ಭಾಗಕ್ಕೂ ಸಾಕಷ್ಟು ಪೆಟ್ಟಾಗಿದ್ದು ನಾಲ್ಕು ಬಾರಿ ಬೇರೆ-ಬೇರೆ ಭಾಗಕ್ಕೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಆಸ್ಪತ್ರೆಯ ಐಸಿಯುನಲ್ಲಿ
ಮಳಗಿರುವ  ನಿಶಾಂತ್‌ಗೆ ಮುಂದೇನೂ ಎನ್ನುವ ಶ್ಯೂನ್ಯತೆ ಆವರಿಸಿದೆ. ಮನೆಯ ನಿರ್ವಹಣೆ,
ತಂದೆ-ತಾಯಿಯ ಹೊಣೆಗಾರಿಕೆ, ಸಹೋದರಿಯ ವಿದ್ಯಾಭ್ಯಾಸ, ಮದುವೆ ಮುಂತಾದ ಜವಬ್ದಾರಿ
ನಿರ್ವಹಿಸಬೇಕು ಎಂದುಕೊಂಡಿದ್ದ ಈತನ ಕನಸುಗಳು ನುಚ್ಚುನೂರಾಗಿದೆ.  ಮಗನ ಈ ಪರಿಸ್ಥಿತಿ
ನೋಡಿ ಹೆತ್ತವರು ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದಾರೆ. ಆತನ ಭವಿಷ್ಯ ಮುಂದೇನು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ. ಈ ಎಲ್ಲಾ ನೋವುಗಳು ಒಂದಡೆಯಾದರೆ ಚಿಕಿತ್ಸೆಗೆ ಹಣ ಹೊಂದಿಸಬೇಕಾಗದ ಸಂಕಷ್ಟ ಇನ್ನೊಂದು ಕಡೆ. ಈಗಾಗಲೇ ಈತನ ಆಸ್ಪತ್ರೆಯ ವೆಚ್ಚಕ್ಕೆ  3ಲಕ್ಷಕ್ಕೂ ಅಧಿಕ ವೆಚ್ಚವಾಗಿದ್ದು,
ಮುಂದೆ ಐದು ಲಕ್ಷದ ತನಕ ಹಣ ಅಗತ್ಯವಿದೆ ಎಂದು  ವೈದ್ಯರು ತಿಳಿಸಿದ್ದಾರೆ. ಆದರೆ ಬಡತನದಲ್ಲಿರುವ ಇವರ ಕುಟುಂಬಕ್ಕೆ ಈ ಹಣವನ್ನು ಹೊಂದಿಸಲು ಸಾದ್ಯವಾಗುತ್ತಿಲ್ಲ ಹಾಗೂ ಸುಮಾರು ಐವತ್ತು ಸಾವಿರ ರೂ ಮೌಲ್ಯದ ಆರೋಗ್ಯ ವಿಮೆ ಹೊರತುಪಡಿಸಿದರೆ ಬೇರೆ ಯಾವುದೇ ವಿಮಾ ಸೌಲಭ್ಯವಿಲ್ಲ ಹೀಗಾಗಿ ಈ ಕುಟುಂಬಕ್ಕೆ ದಾನಿಗಳೇ ದಿಕ್ಕು ಎನ್ನುವಂತಾಗಿದೆ.
ಹನಿ-ಹನಿ ಸೇರಿ ಹಳ್ಳ.. ತೆನೆ-ತೆನೆ ಸೇರಿ ಕಣಜ ಎನ್ನುವಂತೆ ದಾನಿಗಳು ತಮ್ಮ ಕೈಲಾದ
ಸಹಾಯವನ್ನು ಮಾಡುವ ಮೂಲಕ ನೊಂದ ಈ ಕುಟುಂಬಕ್ಕೆ ಸಾಂತ್ವಾನಪಡಿಸಲು ಹಾಗೂ ಆತನ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಲು ಕೈ ಜೋಡಿಸಬೇಕಿದೆ. ಸಹಾಯ ಮಾಡುವವರಿಗೆ ಉಳಿತಾಯ ಖಾತೆಯ ವಿವರ


Ghastly Accident, Family in Distress: Case of Nishanth ShettyThis 21 year old youngster with dreams in his eyes to be of support to his family and independent in life. His unmatched energy and belief in hard work used to amaze the people who knew him. Nishanth opted out of formal education after his SSLC (10th) and trained himself in electric lighting and decorations. He took this with professional zeal and youthful energy with dedication. He was of immense support both financially and morally to his, otherwise struggling, family. Nishanth was an active member who used to actively participate in every social and public events in and around his village.All this came crashing down on the fateful night of 17 May 2019. A car driven by a man, who was high on alcohol, hit Nishanth, who was riding his bike, head on. This ghastly accident happened at Madhuvana, near Kota, Udupi District. He was returning home after finishing his work, at a marriage house, at about 11 pm that night. Fortunately for Nishanth, who was unconscious, the alert passer by helped him reaching hospital immediately. Despite all efforts, doctors at Kasturba Medical College (KMC) Hospital, Manipal amputated his crushed right leg immediately to save his life. The extent of damage to his body is so severe that some of vital organs are also damaged by the impact. His right arm too is fractured. Nishanth underwent four successive surgical procedures in emergency. Fighting his days in ICU and gaining some conscious is considered as a miracle in itself.The reality in life hits much harder than what one could imagine. Nishanth’s family is no exception to that. His father (Mr. Suresh Shetty) is a small time worker in a Bangalore eatery while mother Mrs. Jyothi Shetty) is homely. His sister pursues her education and studies for PUC. The family barely able to support itself financially let alone bearing cost of extended treatment in a specialty hospital. But, it is inevitable as a young life is struggling to recover.Though the team of doctors at KMC have assured that Nishanth is out of danger, his path to recovery is a long drawn battle. The family has spent about ₹3 Lakh already and an additional estimate, by the hospital, is about ₹5 Lakh more required for treatment alone. It requires support from all well wishers including financial help from you. Request all concerned to be forthcoming to help Nishanth and his family to come out of their hour of crisis.

Read More

Know someone in need of funds for a medical emergency? Refer to us
support