Support Director Shankarling Sugnalli(ಶಂಕರಲಿಂಗ ಸುಗ್ನಳ್ಳಿ) | Milaap
Support Director Shankarling Sugnalli(ಶಂಕರಲಿಂಗ ಸುಗ್ನಳ್ಳಿ) Fight H1N1
  • LS

    Created by

    Lalitha Sugnalli
  • SS

    This fundraiser will benefit

    Shankarlinga Sugnalli and Family

    from Bengaluru, Karnataka

ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧ ನಿರ್ದೇಶಕರಾದ ನನ್ನ ಗಂಡ ಶಂಕರ್ಲಿಂಗ್ ಸುಗ್ನಳ್ಳಿ(54 ವರ್ಷ), "ಹಂದಿ ಜ್ವರ" ಎಂದು ಕರೆಯಲ್ಪಡುವ H1N1 ಸೋಂಕಿಗೆ ಒಳಗಾಗಿ, ಅದು ಅವರ ಶ್ವಾಸಕೋಶವನ್ನು ನಾಶಮಾಡಿ ಮತ್ತು ಅವರ ಸಂಪೂರ್ಣ ದೇಹವನ್ನು ದುರ್ಬಲಗೊಳಿಸಿದೆ. H1N1ನ ಪರಿಣಾಮವಾಗಿ, ಅವರಿಗೆ ARDS (ತೀವ್ರ ಉಸಿರಾಟ ತೊಂದರೆಯ ಬಳಲುತ್ತಿರುವ ರೋಗಲಕ್ಷಣ) ಉಂಟಾಗಿದೆ. ಇದು ಶ್ವಾಸಕೋಶಗಳಿಗೆ ಮತ್ತು ರಕ್ತಕ್ಕೆ ಬೇಕಾದ ಆಮ್ಲಜನಕ ಪೂರೈಕೆಯನ್ನು ತಡೆಯುತ್ತದೆ. ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಕೆಂಗೇರಿ, ಐಸಿಯುಗೆ 02 ಸೆಪ್ಟೆಂಬರ್ 2018 ರಂದು ಅಡ್ಮಿಟ್ ಮಾಡಿದ್ದೇವೆ. ನಮ್ಮ ಕುಟುಂಬಕ್ಕೆ ಇಂತಹ ವಿನಾಶಕಾರಿ ಸಮಯ ಬರುತ್ತದೆಂದು ನಾವು ಎಂದು ಕನಸು ಕಂಡಿರಲಿಲ್ಲ.

ಅಡ್ಮಿಟ್ ಆದ ನಂತರ ಎರಡು ದಿನ ವೈದ್ಯರು noninvasive ventilation IV antibiotics and antiviral drugs ನಿಂದ ಚಿಕಿತ್ಸೆ ಪ್ರಾರಂಭ ಮಾಡಿದರಾದರೂ ಅವರ ಸ್ಥಿತಿ 04/09/2018 ರಂದು ವೀಪರೀತ ಹದಗೆಟ್ಟಿತು. ಆದ್ಧರಿಂದ ಅವರನ್ನು ವೆಂಟಿಲೇಟರ್ ನಲ್ಲಿ ಇಡಬೇಕಾದ ಪರಿಸ್ಥಿತಿ ಒದಗಿ ಬಂದಿತು. 08/09/2018 ರಂದು ಅವರ ಶ್ವಾಶಕೋಶದಲ್ಲಿ ಯಾವುದೇ ಬದಲಾವಣೆ ಕಾಣದೆ ಇರುವುದರಿಂದ ಅವರನ್ನು VV ECMO ಚಿಕಿತ್ಸೆಗೆ ಒಳಪಡಿಸಬೇಕಾಯಿತು.

ECMO ಚಿಕಿತ್ಸೆಯಲ್ಲಿ ಸುಮಾರು 45 ದಿನಗಳ ನಂತರ, ಈಗ ಅವರು ಸ್ವಲ್ಪಮಟ್ಟಿನ ಸುಧಾರಣೆಯನ್ನು ತೋರಿಸುತ್ತಿದ್ದಾರೆ ಮತ್ತು ಅವರ ಸ್ಥಿತಿ hemodynamically stable ಆಗಿದೆ ಎಂದು ವೈದ್ಯರು ಹೇಳುತಿದ್ದಾರೆ. ಆದರೆ ಅವರಿಗೆ ಇನ್ನೂ ಕನಿಷ್ಠ 2-3 ವಾರಗಳ VV ECMO ಚಿಕಿತ್ಸೆಯನ್ನು ಮುಂದುವರಿಸಬೇಕಾಗಿದೆ ಮತ್ತು ಇನ್ನು ಹೆಚ್ಚು ದಿನ ಐಸಿಯುನಲ್ಲಿ ಉಳಿಯಬೇಕಾದ ಅಗತ್ಯವಿರುತದೆ.
 ಶ್ರೀ ಶಂಕರ್ಲಿಂಗ್ ಸುಗ್ನಳ್ಳಿ ಕನ್ನಡ ಚಲನಚಿತ್ರ ಉದ್ಯಮದಲ್ಲಿ ಚಲನಚಿತ್ರ ನಿರ್ದೇಶಕರಾಗಿದ್ದಾರೆ. 

ಅವರ ನಿರ್ದೇಶನದ ಕನ್ನಡ ಚಲನಚಿತ್ರಗಳು :
>ಮಹಾದಾಸೋಹಿ ಶರಣ ಬಸವ
>ಏಳು ಕೋಟಿ ಮಾರ್ತಾಂಡ ಬೈರವ
>ವಿಜಯಕಂಕಣ
>ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್
>ಪ್ರೇಮ ದೇವತೆ
>ಕತೆಯಾದ ಕಾಳ-ಇದು ಚಿತ್ರ ರಾಜ್ಯ ಪ್ರಶಸ್ತಿಯನ್ನು ಗೆದ್ದಿದೆ
>ಹೋಳಿ
>ಅದ್ನಾಡಿ ಅಳಿಯ
>ಶ್ರಿ ಕಾಡಸಿದ್ದೇಶ್ವರ ಮಹಿಮೆ
> ಶ್ರಿ ಪಕ್ಕೀರೇಶ್ವರ ಮಹತ್ಮ
>ಮಹಾಯೊಗಿ ಮಹಾದೇವ ವಿಜಯ

ಇನ್ನೂ ಬಿಡುಗಡೆಯಾಗಬೇಕಿದೆ:
>ಕಾಡು ನಮ್ಮ ನಾಡು
>ಶ್ರಿ ಗುರು ಕೊಟ್ಟೂರೇಶ್ವರ

ಅವರ ಹೆಂಡತಿಯಾದ ನಾನು, ಲಲಿತಾ ಸುಗ್ನಳ್ಳಿ ಯಾವಾಗಲೂ ಅವರ ಕೆಲಸಗಳನ್ನು ಸದಾ ಬೆಂಬಲಿಸಿದ್ದೇನೆ.  ನಮಗೆ ನಾಲ್ಕು ಮಕ್ಕಳಿದ್ದಾರೆ ಮತ್ತು ಅವರೆಲ್ಲರೂ ತಮ್ಮ ಅಧ್ಯಯನವನ್ನು ಮುಂದುವರೆಸುತ್ತಿದ್ದಾರೆ. ನನ್ನ ಪತಿ ನಮ್ಮ ಕುಟುಂಬದ ಏಕೈಕ ಸಂಪಾದಕ ಸದಸ್ಯ. ಈಗ ಅವರು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿರುವುದರಿಂದ, ನಮಗೆ ಯಾವುದೇ ನೈತಿಕ, ಆರ್ಥಿಕ ಬೆಂಬಲ ಇಲ್ಲದಂತಾಗಿದೆ. 
ECMO ಮತ್ತು ದೈನಂದಿನ ICU ಶುಲ್ಕಗಳು ವೆಚ್ಚಗಳು ತುಂಬಾ ದುಬಾರಿಯಾಗಿದ್ದು ನಮಗೆ ಎಲ್ಲ ವೆಚ್ಚಗಳನ್ನು ಭರಿಸುವ ಶಕ್ತಿ ಇಲ್ಲದಂತಾಗಿದೆ. ಆಸ್ಪತ್ರೆ ವೆಚ್ಚಗಳನ್ನುಭರಿಸಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಒಟ್ಟು ಬಿಲ್ ಈಗಾಗಲೇ 50 ಲಕ್ಷ ತಲುಪಿದೆ ಮತ್ತು ಅವರು ಐಸಿಯುಯಲ್ಲಿ ಉಳಿಯುವವರೆಗೂ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ಕಷ್ಟ ಸಮಯದಲ್ಲಿ ನಮ್ಮ ಸ್ನೇಹಿತರು ಮತ್ತು ಹಿತೈಷಿಗಳು ನಮ್ಮನ್ನು ಬೆಂಬಲಿಸಲು ತಮ್ಮ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಸಹಾಯದಿಂದ ಮತ್ತು ನಮ್ಮ ಎಲ್ಲಾ ಆಸ್ತಿಗಳನ್ನು ಮಾರಾಟಮಾಡುವುದರಿಂದ, ನಾವು ಇಲ್ಲಿಯವರೆಗೂ 10,45,000 / - ಪಾವತಿಸಿದ್ದೇವೆ. ಇಂತಹ ಕಷ್ಟದ ಸಮಯದಲ್ಲಿ ಹಣಕಾಸಿನ ನೆರವು ಪಡೆಯಲು ಎಲ್ಲಾ ರೀತಿಯ ಪ್ರಯತ್ನವನ್ನು ಪಡುತಿದ್ದೇವೆ. ದಯವಿಟ್ಟು ಈ ಕಠಿಣ ಸಮಯವನ್ನು ಜಯಿಸಲು ಮತ್ತು ನನ್ನ ಪತಿಯನ್ನು ಉಳಿಸಲು ಸಾಧ್ಯವಾದಷ್ಟು ದಾನ ಮಾಡಿ. ಅವರ ಆರೋಗ್ಯ ಚೇತರಿಕೆಯಾಗಿ ಅವರು ಮನೆಗೆ ಹಿಂದುರುಗಲಿ ಎಂದು ಪ್ರಾರ್ಥಿಸುತಿದ್ದೇವೆ. ದಯವಿಟ್ಟು ಈ ಲಿಂಕ್ ಅನ್ನು ನಿಮ್ಮ ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರಿಗೆ ರವಾನಿಸಿ ಇದರಿಂದ ನಾವು ಸ್ವಲ್ಪ ಸಹಾಯವನ್ನು ಪಡೆಯಬಹುದು.

ಧನ್ಯವಾದಗಳು
ಲಲಿತ ಸುಗ್ನಳ್ಳಿ .
98451 98999

This is such a devastating time for our family that we never dreamt of in our life. My husband Shankarling Sugnalli (well known director in kannada film industry) aged 54 years was infected with H1N1, also known as the "Swine Flu", and it destroyed his lungs and debilitated his entire body. As a result of H1N1, he developed ARDS (Acute Respiratory Distress Syndrome) which prevents enough oxygen from getting to the lungs and into the blood. He was rushed to ICU of BGS Hospitals Kengeri, Bangalore on 02 September 2018.
Doctors initially managed to treat with noninvasive ventilation IV antibiotics and antiviral drugs but patient general condition got worsened and electively intubated on 04/09/2018 and patient lung function deteriorated and suddenly required VV ECMO insertion on 08/09/2018 and elective Tracheostomy was done on 17/09/2018 and bronchoscopy done on 18/09/2018 shows thick purulent secretions.
After about 45 days on ECMO therapy, patient is now showing marginal improvement and is hemodynamically stable and in good condition. But he still requires minimum 2-3 weeks of VV ECMO support and longer ICU stay for recovery. Mr. Shankarling Sugnalli (patient) is a film director in Kannada film Industry. He is a very kind person, highly dedicated at work, Extremely passionate in story and lyrics writing. And his directorial Kannada feature films are as followed.
  • Mahadasohi sharanubasava
  • Ellu koti marthand bhairava
  • Vijaykankana
  • Kadlimatti station master
  • Prema devathe
  • Katheyada Kala and this won state award
  • Holi
  • Adnadi aliya
  • shri kada Siddheshwara mahime
  • shri pakkireshwara mahatma
  • mahayogi Mahadeva Vijaya
And yet to be released
  • kadu Namma nadu
  • Shri guru kotureshwara
Throughout his life all he has earned is love and affection in the society.
And as a wife I, Lalitha Sugnalli have always supported his passion for work in films. We have four children and all of them are continuing with their studies. My husband is the only breadwinner of our family. Now since he is bedridden, we are left with no support both morally and financially. The treatment cost for ECMO and daily ICU charges are massive and we are not in a situation to bear whole of it. We are trying to arrange hospital bills in all the possible way we could think of.
The total bill so far already reached 50 lakhs and is still expected to grow higher as long as patient stays in ICU. Our friends and well-wishers are doing their best to support us in this hard time. With their help and selling all our assets, till date we have managed to pay 10,45,000/-.  And now we don’t have any option left in front of us than reaching out to all kind hearted fellow friends, colleagues and relatives for seeking financial support in this extreme time. Kindly donate as much as possible to overcome this hard time and save my husband. We just hope and pray for my husband to get well soon and return back to home. Please pass this link to all friends and relatives so that we can get some help.
 
Thank you...
Lalitha Sugnalli
98451 98999


Read More

Know someone in need of funds? Refer to us
support