ಬನ್ನಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಿಮ್ಮ ಸಹಾಯ ಹಸ್ತ ಚಾಚುವ ಮೂಲಕ ಕನ್ನಡಿಗರಿಗೆ ನೆರವಾಗಿ : ಪ್ರಿತಿಯ ಕನ್ನಡಿಗ ಬಂಧುಗಳೆ ಕೋವಿಡ್-19 ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ವಿಷಮ ಪರಿಸ್ಥಿತಿಗೆ ತಿರುಗುತ್ತಿದ್ದು , ಜನತೆ ಆಸ್ಪತ್ರೆಗಳಲ್ಲಿ ಬೇಡ್, ಆಮ್ಲಜನಕ ಕೊರತೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನತೆಯ ಸುರಕ್ಷತೆಗಾಗಿ ಕರ್ಪ್ಯೂ ಹೆಸರಿನಲ್ಲಿ ಜನತಾ ಲಾಕ್ಡೌನ್ ಹೇರಿದೆ. ಕರ್ನಾಟಕದಾದ್ಯಂತ ಜನತೆ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯದ ಕೊರತೆ ಹಾಗೂ ಒಂದು ಕಡೆ ದುಡಿಮೆಯಿಲ್ಲದೆ ಆರ್ಥಿಕವಾಗಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಎಲ್ಲಾ ಸಂಕಷ್ಟಗಳನ್ನು ಅರಿತು ನಾವು ಜನತೆಗೆ ಸಹಾಯ ಹಸ್ತವನ್ನು ಚಾಚುವ ನಿಟ್ಟಿನಲ್ಲಿ Covid-19 Janatha Relief Fund ಎಂಬ ಒಂದು ಆನ್ಲೈನ್ ದೇಣಿಗೆ ಅಭಿಯಾನವನ್ನು ಕರ್ನಾಟಕದಾದ್ಯಂತ ಆರಂಭಿಸಿದ್ದೇವೆ . ಮೊದಲ ಹಂತದಲ್ಲಿ ಒಂದು ಕೋಟಿ ರೂಪಾಯಿಗಳನ್ನು ಈ ಅಭಿಯಾನದಲ್ಲಿ ಸಂಗ್ರಹಿಸುವ ಗುರಿ ಹೊಂದಿದ್ದು , ಈ ಹಣವನ್ನು ಕೋವಿಡ್ ಸಂದರ್ಭದಲ್ಲಿ ಹಸಿದ ಹೊಟ್ಟೆಗೆ ಉಚಿತವಾಗಿ ಊಟ ನೀಡಲು , ಕೋವಿಡ್ ರೋಗಿಗಳಿಗೆ ಆಮ್ಲಜನಕ ಒದಗಿಸಲು , ಉಚಿತ ಆಂಬುಲೆನ್ಸ್ ಸೇವೆ ಒದಗಿಸಲು, ಕೊವಿಡ್ ಮೃತರ ಅಂತ್ಯ ಸಂಸ್ಕಾರ ನೇರವೆರಿಸಲು ಸಹಾಯ ಹಾಗೂ ಕೋವಿಡ್ ವಾರಿಯರ್ಸ್ಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ವಿನಿಯೋಗಿಸಲಾಗುವುದು . ಈ ಅಭಿಯಾನದಲ್ಲಿ ಸಂಗ್ರಹಿಸಿದ ಮೊತ್ತದ ಸದ್ಭಳಕೆಗಾಗಿ The Saffron Foundation ಜೊತಗೂಡಿ ಜನತಾ ಸಹಾಯವಾಣಿಯನ್ನು ಕರ್ನಾಟಕದಲ್ಲಿ ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದು ಕರ್ನಾಟಕದ ಪ್ರತಿಯೊಬ್ಬರು ಜನತೆ , ಸಂಘ ಸಂಸ್ಥೆಗಳು, ನಟರು, ರಾಜಕಾರಣಿಗಳು, ಮಾಧ್ಯಮಗಳು, ಧಾರ್ಮಿಕ ಸಂಘ ಸಂಸ್ಥೆಗಳು ಧನ ಸಹಾಯವನ್ನು ನೀಡಿ ನಮ್ಮ ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ವಿನಂತಿ . ಅಂತೆಯೆ ಜನತೆಗೆ ಸಹಾಯದ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಿ ಸಂಖ್ಯೆ : 9945074064, 9743286818 ( ಮಂಗಳೂರು , ದ.ಕ ಜಿಲ್ಲೆ , ಕರ್ನಾಟಕ )